Thursday, December 8, 2016

ನಿತ್ಯ ಸತ್ಯ - ೫


 1. ಅನೇಕ ಬಗೆಯ ಜನರು ಇರುವುದರಿಂದ ಜಗತ್ತು ನಡೆಯುತ್ತದೆ. ಇಲ್ಲವಾದರೆ ಓಡುತ್ತಿತ್ತು ಅಥವಾ ಇದ್ದಲ್ಲೇ ಇರುತ್ತಿತ್ತು.
 2. ಭೂಮಿಯೇ ಸ್ವರ್ಗವಾಗಬಹುದು; ನನ್ನದು, ನಿನ್ನದು ಎನ್ನುವ ವ್ಯತ್ಯಾಸ ಇಲ್ಲದಾದಾಗ ಮಾತ್ರ; ಗುಂಡಿನ ಮತ್ತಿನ ಗಮ್ಮತ್ತು ಇದಕ್ಕೊಂದು ಉದಾಹರಣೆ.
 3. ಓಣಿಗಳು ಸ್ವಚ್ಚವಿರಬೇಕೆಂದರೆ ಪ್ರತಿಯೊಬ್ಬರೂ ತಂತಮ್ಮ ಮನೆಯ ಮುಂದಿನ ಕಸವನ್ನು ಗುಡಿಸಿ, ತೊಟ್ಟಿಗೆ ಹಾಕಬೇಕು. 
 4. ನಿದ್ದೆ ಮಾಡುವವರನ್ನು ಎಬ್ಬಿಸಬಹುದು; ನಿದ್ದೆ ಮಾಡಿದಂತೆ ನಟಿಸುವವರನ್ನು ಬಡಿದೆಬ್ಬಿಸಬೇಕಾಗುವದು.
 5. ತಿಂಡಿ ಕೊಟ್ಟು ನಾಯಿಯನ್ನು ಒಲಿಸಬಹುದು. ತೀರ್ಥ(?) ಕೊಟ್ಟು ಮನುಷ್ಯನನ್ನು ಒಲಿಸಬಹುದು.
 6. ಮೀಸೆ ಇಲ್ಲದ ಪೊಲೀಸನಿಗೆ, ಗಡ್ಡ ಇಲ್ಲದ ಭೈರಾಗಿಯನ್ನು ಕಂಡಾಗ ಕ್ರಮವಾಗಿ ಭಯ-ಭಕ್ತಿ ಹುಟ್ಟಲಾರದು.
 7. ಮಾಡುವೆ ಆಗದವರ ಮತ್ತು ಮದುವೆ ಆದವರ ನಡುವೆ ಒಂದು ಎತ್ತರವಾದ ಗೋಡೆಯಿದೆ. ಆ ಕಡೆ ಚನ್ನಾಗಿದೆ ಎಂದು ಅವನು, ಈ ಕಡೆ ಚನ್ನಾಗಿತ್ತು ಎಂದು ಇವನು ಅಂದುಕೊಳ್ಳುತ್ತಾರೆ.
 8. ಹೆಚ್ಚು ಎತ್ತರಕ್ಕೆ ಹೋದಂತೆಲ್ಲ ನೀನು ಏಕಾಂಗಿ ಆಗುತ್ತೀ ಎಂಬದನ್ನು ಮರೆಯಬಾರದು.
 9. ಹೆಂಗಸಿಗೆ ಅವನ ಪ್ರೀತಿ ಬೇಕು. ಹೆಂಡತಿಗೆ ಅವನ ಜೀವ ಬೇಕು.
 10. ಪ್ರೇಮರೋಗವೊಂದನ್ನು ಬಿಟ್ಟು ಬಹುತೇಕ ಎಲ್ಲಾ ರೋಗಗಳಿಗೆ ಔಷಧ ಇದೆ.
 11. ವ್ಯಾಪಾರದ ಒಳಗುಟ್ಟು ಎಂದರೆ – ಸಾಧ್ಯವಾದಷ್ಟು ಕಡೆಮೆ ಬೆಲೆಗೆ ವಸ್ತು ಖರೀದಿಸುವುದು, ಸಾಧ್ಯವಾದಷ್ಟು ಹೆಚ್ಚಿನ ಬೆಲೆಗೆ ಅದನ್ನು ಮಾರುವುದು.
 12. ಪಂಜರದಲ್ಲಿ ಗಿಳಿ, ಅಕ್ವೇರಿಯಂನಲ್ಲಿ ಮೀನುಗಳನ್ನು ಸಾಕಿ, ಮನೆಯಲ್ಲಿಟ್ಟು ಸಂತೋಷಪಡುವವರು ತಮ್ಮ ಹೆಂಡತಿ-ಮಕ್ಕಳನ್ನು ಅದೇ ರೀತಿ ಬಂಧನದಲ್ಲಿಡಲು ಪರೋಕ್ಷವಾಗಿ ಬಯಸುವರು.
 13. ಮದುವೆಗೆ ಸರಿಯಾದ ವಯಸ್ಸು ಎಂಬುದಿಲ್ಲ; ಸರಿಯಾದ ಮನಸ್ಸು ಎಂಬುದು ಬೇಕು.

ನಿತ್ಯ ಸತ್ಯ - ೪


 1. ಯಾರೋ ಬರೆದಿದ್ದನ್ನು ಇನ್ಯಾರೋ ಓದಬೇಕಾಗುತ್ತದೆ.
 2. ಫ್ಯಾಶನ್ ಹೆಚ್ಚಾದಂತೆಲ್ಲ, ಬಟ್ಟೆ ಅವಶ್ಯಕತೆ ಕಡಿಮೆಯಾಗುತ್ತಿದೆ.
 3. ಬಡತನಕ್ಕಿಂತಲೂ ಮೂರ್ಖತನ ಲೇಸು.
 4. ವೃಧ್ಧ್ಯಾಪ್ಯ ಬಿಟ್ಟರೂ, ಸಾವು ಯಾರನ್ನೂ ಬಿಡುವುದಿಲ್ಲ.
 5. ಎಲ್ಲರೂ ತಂತಮ್ಮ ಪಾಲಿನ ಭೂಮಿಯನ್ನು ತಮ್ಮೊಂದಿಗೆ ಒಯ್ಡಿದ್ದರೆ, ಈಗಿನವರು ಸಮುದ್ರದಲ್ಲೋ ಅಥವಾ ಆಕಾಶದಲ್ಲೋ ವಾಸಿಸಬೇಕಾಗುತ್ತಿತ್ತು.
 6. ಸುಖ ಎನ್ನುವುದು ಮನೆಯಲ್ಲಿಲ್ಲ, ಮನದಲ್ಲಿದೆ.
 7. ಅನಾಗರಿಕರು ಮತ್ತು ಅತೀ ನಾಗರಿಕರು, ಅತೀ ಕಡಿಮೆ ಬಟ್ಟೆ ಧರಿಸುತ್ತಾರೆ.
 8. ನಾವು ಗಲ್ಸುವುದು ಯಾರಿಗಾಗಿ ಏನೋ, ಮಲಗುವುದು ಮಾತ್ರ ನಮಗಾಗಿ.
 9. ಎಲ್ಲಾ ಜಿಪುಣರು ಶ್ರೀಮಂತರಾಗುವರೆಂದೆನಿಲ್ಲ.
 10. ಕಾರಿನಲ್ಲಿ ಕುಳಿತುಕೊಂಡು ಹೋಗುವ ನಾಯಿ, ಅವರ ಮನೆ ಆಳಿಗಿಂತ ಮೇಲು.
 11. ಹೆಚ್ಚು ಸುಂದರಿಯರಿಗೆ, ಕಡಿಮೆ ಆಭರಣಗಳು ಸಾಕು.
 12. ತಮ್ಮ ಕುರೂಪವನ್ನು ಮುಚ್ಚಲು, ಹೆಚ್ಚು ಆಭರಣಗಳನ್ನು ಧರಿಸುತ್ತಾರೆ.
 13. ಜೀವನವನ್ನು ಹಗುರವಾಗೆ ತೆಗೆದುಕೊಂಡಿರುವವರು, ಸಿಟಿಬಸ್ ಬಾಗಿಲ ಬಳಿ ನಿಂತೇ ಪಯಣಿಸುತ್ತಾರೆ.
 14. ಯಾರ ಬಳಿ ಸಮಯವಿಲ್ಲವೋ, ಅವರ ಬಳಿ ಹಣವಿದ್ದು ಏನು ಪ್ರಯೋಜನ?
 15. ಸ್ವರ್ಗ ಹೆಗ್ಡೆ ಎಂದು ತಿಳಿದವರು ವಿರಳ, ಮಾತನಾಡುವವರು ಹೇರಳ.
 16. ಕೋರ್ಟ್-ಕಚೇರಿಗಳಿಗೆ ಹೆದರುವವರು, ತಮ್ಮ ಮಕ್ಕಳಲ್ಲೊಬ್ಬರನ್ನು ವಕೀಳರನ್ನಾಗಿ ಮಾಡಬೇಕು.
 17. ಟಿವಿ ಬಂದಾಗಿನಿಂದ, ಅಕ್ಕ-ಪಕ್ಕದ ಮನೆಯವರು ಮಾತಾಡುವುದು ಕಡಿಮೆಯಾಗಿದೆ.
 18. ಒಬ್ಬ ಮನುಷ್ಯ ಹೇಗಿದ್ದಾನೆಂದು ತಿಳಿದುಕೊಳ್ಳಬೇಕೆಂದರೆ, ಅವನಿಗೆ ಅಧಿಕಾರ ಕೊಟ್ಟು ನೋಡಬೇಕು.
 19. ಯಾವುದು ಸುಲಭವಾಗಿ ಬರುತ್ತದೆಯೋ, ಅದು ಸುಲಭವಾಗಿ ಹೋಗುತ್ತದೆ.
 20. ಗಿಡದ ಯಾವುದೋ ಒಂದು ಟೊಂಗೆ ಹೆಚ್ಚು ಬಾಗಿದ್ದರೆ, ಅದರಲ್ಲಿ ಹೆಚ್ಚು ಹಣ್ಣುಗಳೇ ಇರುತ್ತಾವೆಂದು ಅನ್ನುವುದು ಯಾವಾಗಲೂ ನಿಜವಲ್ಲ.
 21. ಹಲ್ಲುಗಳನ್ನು ಸ್ವಚ್ಚವಾಗಿಟ್ಟುಕೊಂಡವರು ಧಾರಾಳವಾಗಿ ನಗಬಹುದು.
 22. ಜೀವನವು ಒಂದು ನಾಟಕ; ಅತೀ ಬುದ್ದಿವಂತನ ಅಥವಾ ಮೂರ್ಖನ ಪಾತ್ರವನ್ನು ಆರಿಸಿಕೊಂಡರೆ ನಿಶ್ಚಿಂತೆಯಾಗಿರಬಹುದು.
 23. ಜಗತ್ತಿನಲ್ಲಿ ಎಲ್ಲಾ ಸಾಲವನ್ನು ತೀರಿಸಬಹುದು. ಆದರೆ ಸಮಯ ಎಂಬ ಸಾಲವನ್ನು ಯಾರಿಂದಲೂ ತೀರಿಸಲಸಾಧ್ಯ.

ನಿತ್ಯ ಸತ್ಯ - ೩


 1. ಸೂರ್ಯೋದಯದ ನಂತರ ಹಾಸಿಗೆಯಿಂದ ಏಳುವವರು, ಸೂರ್ಯ ವಂಶಸ್ಥರು.
 2. ಕಂದೀಲು, ಕಟ್ಟಿಕೊಂಡ ಹೆಂಡತಿ; ವಿದ್ಯುದೀಪ, ಇಟ್ಟುಕೊಂಡ ಹೆಂಡತಿ.
 3. ಹಿಂದಿನ ದಿನಗಳಲ್ಲಿ – ಬೇಸಿಗೆಕಾಲ, ಮಳೆಗಾಲ, ಚಳಿಗಾಲ; ಇಂದಿನ ದಿನಗಳಲ್ಲಿ ಒಂದೇ ಕಾಲ – ಬರಗಾಲ.
 4. ದಿಲ್ಲಿಯಲ್ಲಿರುವವರೆಲ್ ಸಿರಿವಂತರಲ್ಲ, ಹಲ್ಲಿಯಲ್ಲಿರುವವರೆಲ್ಲ ಬಡವರಲ್ಲ.
 5. ಗಡಿಯಾರದ ಮುಳ್ಳನ್ನು ಹಿಂದಕ್ಕೆ ತಿರುಗಿಸಬಹುದು, ಆದರೆ ದಿನಗಳನ್ನು ಹಿಂದಕೆ ತಿರುಗಿಸಲು ಬಾರದು.
 6. ಹೆಚ್ಚಿಗೆ ಕಲಿತವರು ಸ್ವಂತ ಉದ್ಯೋಗ ಮಾಡಲು ಹಿಂಜರಿಯುತ್ತಾರೆ, ಯಾಕೆಂದರೆ ಅವರು ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ.
 7. ರಿಸ್ಕನ್ನು ಎಂಜಾಯ್ ಮಾಡುವವರು, ಯಶಸ್ವಿ ಉದ್ಯಮಪತಿಗಳಾಗುತ್ತಾರೆ.
 8. ತಂದೆಯಾದವನು, ತಾನು ಏನು ಮಾಡಬೇಕೆಂದು ಅಂದುಕೊಂಡಿದ್ದನೋ ಅದನ್ನು ತನ್ನ ಮಕ್ಕಳಿಂದ ಮಾಡಿಸಲು ಯತ್ನಿಸುತ್ತಾನೆ.
 9. ಪ್ರತಿ ಕ್ಷಣ ಕಳೆದಂತೆಲ್ಲ, ನಾವು ಸಾವಿಗೆ ಸಮೀಪ ಹೋಗುತ್ತಿದ್ದೇವೆ.
 10. ಇಂದಿನ, ಈ ಹೆಣಗಾಟ, ನಾಳಿನ ದಿನ ಸುಗಮ ಆಗಲೆಂದೇ.
 11. ಲಕ್ಷಗಟ್ಟಲೆ ಲಂಚ ಕೊಟ್ಟಾದರೂ ಸರಿ, ಸರಕಾರೀ ನೌಕರಿಯನ್ನೇ ಹಿಡಿಯಲು ಮುಖ್ಯ ಕಾರಣವೇನೆಂದರೆ, ಕೆಲಸದ ಸುರಕ್ಷತತೆಯೆಂಬ ಭ್ರಮೆ.
 12. ಎಷ್ಟೋ ಜನರು, ಮಾಡುವೆ ಎಂಬುದು ಏನೆಂದು ತಿಳಿಯುವ ಮೊದಲೇ ಮದುವೆಯಾಗಿರುತ್ತಾರೆ. ಅಂತೆಯೇ ಮುಂದಿನ ಎಲ್ಲಾ ಜೀವನವನ್ನು ತಿಳುವಲಿಕೆಯಿಲ್ಲದಯೇ ಸಾಗಿಸುತ್ತಾರೆ.
 13. ಆಸ್ತಿಕ – ದೇವರನ್ನು ನಂಬುವುದಕ್ಕಿಂತ ಹೆಚ್ಚಾಗಿ ‘ದೇವರು’ ಎಂಬ ಪದವನ್ನು ನಮ್ಬಿರುತ್ತಾನೆ. ಅಂತೆಯೇ, ನಾಸ್ತಿಕ – ದೇವರಿಲ್ ಎಂದು ವಾದಿಸುವುದಕ್ಕಿಂತ, ‘ದೇವರಿಲ್ಲ’ ಎಂಬ ಪದದ ಬಗ್ಗೆ ಹೆಚ್ಚಿನ ವಿರೋಧ ವ್ಯಕ್ತಪದಿಸುತ್ತಿತುತ್ತಾನೆ.
 14. ಮದುವೆಗಳು ಸ್ವರ್ಗದಲ್ಲಿ ಆಗಿರುತ್ತವೆ ಎಂದು ಹೇಳುತ್ತಾರೆ. ಆದರೆ ಎಷ್ಟೋ ಮದುವೆಗಳು, ಮನೆಯ ಮುಂದೆ, ದೇವಸ್ಥಾನಗಳಲ್ಲಿ, ಮತ್ತು ಮಂಗಳ ಕಾರ್ಯಾಲಯಗಳಲ್ಲಿ ಜರುಗುವುದನ್ನು ನಾವು ನೋಡುತ್ತೇವೆ.
 15. ಸತ್ತ ಮೇಲೆ ವೈಷ್ಣವರು ವೈಕುಂಠಕ್ಕೆ, ಶೈವರು ಕೈಲಾಸಕ್ಕೆ ಹೋಗುತ್ತಾರಂತೆ; ವೈಷ್ಣವರು ಕೈಲಾಸಕ್ಕೂ, ಶೈವರು ವೈಕುಂಠಕ್ಕೂ ಯಾಕೆ ಹೋಗುವುದಿಲ್ಲ ಎಂಬುದು ನಿಗೂಢ.
 16. ವಿದ್ಯುತ್ ನಿಲುಗಡೆ ಯಾವಾಗ ಆಗುತ್ತದೆ ಎಂದು ಯಾವ ಜ್ಯೋತಿಷಿಯೂ ಹೇಳಲಾರ.
 17. ಸಮಯೋಚಿತ ಸುಳ್ಳು ಹೇಳುವವರನ್ನು ‘ಠಕ್ಕ ‘ ಅನ್ನುವುದಾದರೆ, ಸಮಯೋಚಿತ ಸತ್ಯ ಹೇಳುವವರನ್ನು ‘ಸತ್ಯ ಹರಿಶ್ಚಂದ್ರ’ ಅನ್ನುತ್ತಾರೆ.
 18. ಸಿಲ್ವಸ್ತರ್ ಸ್ತಾಲ್ಲಿನ್, ಶಾರನ್ ಸ್ಟೋನ್, ಜೇಮ್ಸ್ ಬಾಂಡ್ ಇವರುಗಳ ಕನ್ನಡೀಕರಣದ ಹೆಸರುಗಳು – ಬೆಳ್ಳಿಯಪ್ಪ ಕುದರಿ, ಶಾರದಾ ಕಲ್ಲೇಶಿ, ಜಾನುಸಾ ಬಂಡು.
 19. ತೊಂದರೆಗಳು ಮತ್ತು ಸಾವು – ಇವೆರಡನ್ನು ಬಿಟ್ಟು ಉಳಿದೆಲ್ಲವುಗಳು ಇಗಲೇ ಬರಲೆಂದು ಮನುಷ್ಯ ಬಯಸುತ್ತಾನೆ.
 20. ಅತ್ತೆಗೆ ಅಳಿಯನ ಮೇಲೆ ಪ್ರೀತಿ ಇರುವಿದರಿಂದ ಮಗಳನ್ನು ಕೊಟ್ಟು ಮದುವೆ ಮಾಡಿರುತ್ತಾಳೆ.
 21. ಇನ್ನೊಬ್ಬನ ಜೀನನ ಉಳಿಸಲು ಹೋಗಿ ತನ್ನ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸುವವರನ್ನು ‘ಮೂರ್ಖ’ ಎನ್ನುತ್ತಾರೆ.
 22. ಕೋಗಿಲೆಯ ಕಂಠ ಕಾಗೆ ಕರ್ಕಶ.
 23. ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು; ನಿಂತು ಉಂಡರೂ ಕೂಡ.
 24. ಪ್ರತಿಯೊಂದು ಕೀಲಿಯ ಕೈ, ಕಳ್ಳನ ಕೈಲಿರುತ್ತದೆ.
 25. ಗ್ಲಾಸುಗಳಲ್ಲಿ ಮುಳುಗಿದವರಿಗೆ ಬೇರೆ ಎಲ್ಲೂ ಮುಳುಗುವ ಅವಶ್ಯಕತೆ ಇರುವುದಿಲ್ಲ.

ನಿತ್ಯ ಸತ್ಯ - ೨


 1. ಸುಳ್ಳಿನ ಸರಮಾಲೆಯನ್ನು ವೈಭವೀಕರಿಸಿ ಹೇಳುವ ಚತುರರನ್ನು ಉತ್ತಮ ವಾಗ್ಮಿಗಳೆಂದು ಕರೆಯುತ್ತದೆ ಈ ಜಗತ್ತು. 
 2. ಈ ಜಗತಿನಲ್ಲಿ ಕಳ್ಳರು ಇರದಿದ್ದರೆ, ಪೋಲೀಸರ ಅವಶ್ಯಕತೆಯೇ ಇರುತ್ತಿರಲಿಲ್ಲ. 
 3. ಸುಳ್ಳನ್ನು ಸತ್ಯವೆಂದು ಸಾಧಿಸಿ, ತನ್ನ ಕಕ್ಷಿದಾರರನ್ನು ಗೆಲ್ಲಿಸಿದ ವಕೀಲರು ಹೆಚ್ಚು ಬೇಗ ಶ್ರೀಮಂತರಾಗುತ್ತಾರೆ. 
 4. ಸತ್ಯವಂತರಿಗಿದು ಕಾಲವಲ್ಲ ಅನ್ನುವುದೆಲ್ಲಾ ಬರೀ ಸುಳ್ಳು; ರಾಜಾ ಹರಿಶ್ಚಂದ್ರನ ಕಾಲದಲ್ಲೂ ಸತ್ಯವಂತರಿಗೆ ಸುಖವಿರಲಿಲ್ಲ. 
 5. ಸೀತೆ, ಲಕ್ಷ್ಮಣರೇಖೆಯನ್ನು ದಾತಿರದಿದ್ದರೆ, ರಾಮಾಯಣದ ಯುಧ್ದ ಸಂಭವಿಸುತ್ತಿರಲಿಲ್ಲ. 
 6. ಅಹಲ್ಯ, ಸೀತಾ, ತಾರ, ದ್ರೌಪದಿ ಮತ್ತು ಮಂಡೋದರಿ – ಇವರುಗಳು ಪಂಚ ಮಹಾ ಪತಿವೃತೆಯರು. ಸೋಜಿಗದ ಸಂಗತಿಯೆಂದರೆ ರಾಮನ ಹೆಂಡತಿ ಸೀತೆಯೂ, ರಾವಣನ ಹೆಂಡತಿ ಮಂಡೋದರಿ ಇಬ್ಬರೂ ಪತಿವೃತೆಯರೇ. ಪತಿ ಒಳ್ಳೆಯವನಿರಲಿ, ಕೆಟ್ಟವನಿರಲಿ, ಸತಿ ತಾನು ಮಾತ್ರ ಪತಿವೃತೆ ಆಗಿರಲು ಸಾಧ್ಯ ಎಂಬುದಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇರೊಂದಿಲ್ಲ. 
 7. ಕಂದಿಲನ್ನು ನೋಡಿ ವಿದ್ಯುತದೀಪ ನಕ್ಕಿತು. ಈಗ ವಿದ್ಯುತದೀಪವನ್ನು ಕಂಡು ಕಂದಿಲ ವಿಷಾದ ವ್ಯಕ್ತಪಡಿಸುತ್ತಿದೆ. 
 8. ದೇವರು ಎಲ್ಲಾ ಕಡೆಗೆ ಇದ್ದಾನೆ ಎಂದು ಆಸ್ತಿಕರು ಹೇಗೆ ನಂಬುತ್ತಾರೋ, ಹಾಗೆಯೇ ದೇವರು ಎಲ್ಲೂ ಇಲ್ಲ ಎಂಬ ನಾಸ್ತಿಕರ ವಾದ ಅಷ್ಟೇ ಸತ್ಯ. 
 9. ಸುಖಿಯಾಗಿರಬೇಕೆಂದರೆ ಹುಚ್ಚನಾಗಬೇಕು, ಇಲ್ಲ ಪೆದ್ದನಾಗಬೇಕು. 
 10. ಕೆಲವು ಶ್ರೀಮಂತರು ಬದವರಾಗಳು ಒಪ್ಪಿದರೆ, ಲಕ್ಷಾಂತರ ಬಡವರು ಶ್ರೀಮಂತರಾಗಬಹುದು. 
 11. ‘ಪ್ರೀತ್ಸೆ’, ‘ಪ್ರೀತ್ಸೋದ್ ತಪ್ಪಾ’, ‘ಪ್ರಿತಿಸ್ಲೇಬೇಕು’, ‘ಪ್ರೀತಿ ಮಾಡು ತಮಾಷೆ ನೋಡು’, ..., ಹೀಗೆಯೇ ಮುಂದುವರೆದರೆ, ‘ಎಲ್ಲರೂ ಮಾಡುವುದೇ ಪ್ರಿತಿಗಾಗಿ’ ಎಂದಾಗಬಹುದು ಮುಂದೊಂದು ದಿನ. 
 12. ಐದೂ ಬೆಳರುಗಳು ಸಮ ಇದ್ದಾರೆ, ಬಲಯುತವಾದ ಮುಷ್ಠಿ ಮಾಡಲು ಸಾಧ್ಯವಿಲ್ಲ. 
 13. ಪರಿಕ್ಷೆ ಪಾಸಾದ ಮಾತ್ರಕ್ಕೆ, ಆ ವಿಷಯ ತಿಳಿದಿದೆ ಎಂಬುದು ಯಾವಾಗಲೂ ಸತ್ಯವಲ್ಲ. 
 14. ಅಂಗೈಯಲ್ಲಿ ಕನ್ನಡಿಯಿದ್ದರೆ, ಎಲ್ಲಿಯ ಹುಣ್ಣನ್ನು ಬೇಕಾದರೂ ನೋಡಿಕೊಳ್ಳಬಹುದು. 
 15. ಹುಣ್ಣಿಮೆ ಕಾಣಿಸುತ್ತದೆ. ಆದರೆ ಅಮಾವಾಸ್ಯೆ ಕಾಣಿಸುವುದಿಲ್ಲ. 
 16. ಗೋಡೆ ಮೇ ಪೋಸ್ಟರ್ ಅಂಟಿಸುವುದು ಕೆಲವರ ಕಾಯಕವಾದರೆ, ಅವುಗಳನ್ನು ಹರಿಯುವುದು ಹಲವರ ಕಾಯಕ. 
 17. ಕಾಮಲೆಯಾದವರು ನೀಲಿ ಗಾಜಿನ ಕನ್ನಡಕ ಧರಿಸಿದರೆ, ಜಗತ್ತೆಲ್ಲ ಹಸಿರು ಹಸಿರು. 
 18. ಮೀಸೆಯಿಲ್ಲದ ಹುಡುಗರನ್ನು, ಹುಡುಗಿಯರು ಅಷ್ಟಾಗಿ ಇಷ್ಟ ಪಡುವುದಿಲ್ಲ. 
 19. ಯಲ್ಲಪ್ಪ – ಸೌದತ್ತಿಯ ರೇಣುಕಾ ಯಲ್ಲಮ್ಮ ದೇವರಿಗೆ ಬೇಡಿಕೊಂಡು ಹಡೆದ ಗಂಡುಮಗು. 
 20. ಮನುಷ್ಯನಿಗೆ ಹೊಟ್ಟೆ ಇರದಿದ್ದರೆ, ದುಡಿಯುವ ಪ್ರಸಂಗವೇ ಬರುತ್ತಿರಲಿಲ್ಲ. 
 21. ಮನುಷ್ಯ ಪ್ರಾಣಿ, ಒಂದನ್ನು ಬಿಟ್ಟು ಮತ್ಯಾವ ಪ್ರಾಣಿಯೂ ದುಡ್ಡಿಗಾಗಿ ದುಡಿಯುವುದಿಲ್ಲ. 
 22. ಲಾಟರಿ ಟಿಕೆಟ್ ಕೊಂದು, ಉದ್ದರವಾದವರು ಬಹಳ ಜನ ಇರದಿದ್ದರೂ, ಹಲವರಾದರೂ ಇದ್ದಾರೆ. 
 23. ಸರಕಾರದ ಕೆಲಸ ದೇವರ ಕೆಲಸ, ಸರಾರಿ ನೌಕರರು ದೇವರ ನೌಕರರು, ಸರಕಾರದ ಹಣ ದೇವರ ಹಣ. ಆದರೆ ಸರಕಾರದ ಇಷ್ಟ ದೇವರ ಇಷ್ಟವಲ್ಲ. 
 24. ಗುಲಾಬಿ ಹೂವಿನೋದಿಗೆ ಮುಳ್ಳು ಇರುವಂತೆ, ಹಣದ ಹೋದತಿಗೆ, ಹೆಂಡತಿ ಗಂಡನಿಗೆ ರಕ್ಷೆಯಾಗಿರಬೆಕು. 
 25. ಕನ್ನಡಿಯ ಮುಂದೆ ಹೆಚ್ಚು ಕಾಲ ಕಳೆಯುವ ಹೆಂಗಲೆಯರೆಲ್ಲಾ, ತಾವು ಹೆಚ್ಚು ಸುಂದರಿಯರಾಗಿ ಕಾಣುತ್ತೆವೆಂದು ತಿಳಿಯುತ್ತಾರೆ.

Wednesday, December 7, 2016

ನಿತ್ಯ ಸತ್ಯ - 1


 1. ಗಡ್ಡ ಬಿಟ್ಟವರೆಲ್ಲ ಬುದ್ದಿಜೀವಿಗಳಲ್ಲ; ಬುದ್ದಿಜೀವಿಗಳೆಲ್ಲ ಗಡ್ಡ ಬಿಡಬೇಕೆಂದೆನಿಲ್ಲ.
 2. ಅವಿವಾಹಿತನ ಅಂಗಿಗೆ ಒಂದು ಗುಂಡಿ ಇರಲಿಕ್ಕಿಲ್ಲ; ವಿವಾಹಿತನ ಅಂಗಿಯ ಎಲ್ಲಾ ಗುಂಡಿಗಳೂ ಮುಕ್ಕೇ.
 3. ನಮಗೆ ಬೇಕಾದ ಬಸ್ಸೊಂದನ್ನು ಬಿಟ್ಟು, ಉಳಿದೆಲ್ಲ ಬಸ್ಸುಗಳು ವೇಳೆಗೆ ಸರಿಯಾಗಿ ಬಂದು ಹೋಗುತ್ತವೆ.
 4. ಕಳ್ಳರು ನಿಮ್ಮ ಮನೆಗೆ ಕಣ್ಣ ಹಾಕಿದ್ದರೆಂದರೆ, ನೀವು ಶ್ರೀಮಂತರೆಂದೇ ಅರ್ಥ.
 5. ದೊಡ್ಡ ಕನ್ನಡಿ ಮುಂದೆ ನಿಂತು ಸಿಂಗರಿಸಿಕೊಳ್ಳುವವರೆಲ್ಲಾ ಸುಂದರಿಯರೇ ಇರಬೇಕಿಲ್ಲ.
 6. ಬಕ್ಕ ತಲೆಯಲ್ಲಿ ಕೂದಲು ಬರುವುದೆಂದು ಪ್ರಯತ್ನಿಸುವಾತನೇ ನಿಜವಾದ ಆಶಾವಾದಿ.
 7. ಅಂಗಿಯ ಮೇಲಿನ ಗುಂಡಿಯನ್ನು ಬಿಚ್ಚಿಕೊಂಡು ಅಡ್ಡಾಡುವವರ ಮೂಲ ಉದ್ದೇಶ, ತಮ್ಮ ಕೊರಳಲ್ಲಿಯ ಚಿನ್ನದ ಚೈನನ್ನು ಪ್ರದರ್ಶಿಸಲೆಂದೇ.
 8. ಕೆಲವರಿಗೆ ಮಕ್ಕಳಿಗಿಂತ, ನಾಯಿ-ಬೆಕ್ಕುಗಳ ಮೇಲೆಯೇ ಪ್ರೀತಿ ಜಾಸ್ತಿ; ಯಾಕೆಂದರೆ ಅವು ತಿರುಗಿ ಮಾತನಾಡುವುದಿಲ್ಲ.
 9. ಸೈಕಲ್ ಮೇಲೆ ಹೋದರೆ ಒಂದು ನಮಸ್ಕಾರ; ಬೈಕ್ ಮೇಲೆ ಹೋದರೆ ನುಉರು ನಮಸ್ಕಾರ; ಕಾರಿನಲ್ಲಿ ಹೋದರೆ ಸಾವಿರ ನಮಸ್ಕಾರ.
 10. ಗಾಯದ ಸುತ್ತ ಮಾತ್ರ ಕೆರೆಯಬೇಕು; ಕೆರೆದುಕೊಂಡು ಗಾಯ ಮಾಡಿಕೊಳ್ಳಬಾರದು.
 11. ಬಾಹ್ಯ ಸೌಂದರ್ಯ ಎಷ್ಟೇ ಇರಬಹುದು; ಒಳಗಿನ ಮೂಲ ವಸ್ತುಗಳು – ರಕ್ತ, ಮಾಂಸ ಮತ್ತು ಎಲುಬುಗಳೇ.
 12. ದಿನಾ ಶೇವಿಂಗ್ ಮಾಡಿಕೊಳ್ಳುತ್ತಿದ್ದ ಯುವಕ, ಮದುವೆಯ ನಂತರ ಮರೆತುಬಿಟ್ಟ.
 13. ಮಧ್ಯರಾತ್ರಿ ಕರೆಂಟ್ ಹೋಗಿ, ತುರುಗು ಫ್ಯಾನ್ ನಿಂತಾಗಲೂ, ನಿದ್ರೆ ಮಾಡುತ್ತಿರುವವನೇ ನಿಶ್ಚಿಂತನು.
 14. ಹನಮವ್ವ – ಎಂದರೆ, ಹಣಮಂತ್ ದೇವರಿಗೆ ಬೇಡಿಕೊಂಡು ಹಡೆದ ಹೆಣ್ಣುಮಗು.
 15. ಇಂಗ್ಲೀಷ್ ಪೇಪರ್ ತರಿಸುವವರಿಗೆಲ್ಲ ಇಂಗ್ಲೀಷ್ ಬರಲಿಕ್ಕಿಲ್ಲ; ಇಂಗ್ಲೀಷ್ ಬರುವವರು ಸದಾ ಇಂಗ್ಲೀಷ್ ಪೇಪರನ್ನೇ ಓದುವುದಿಲ್ಲ.
 16. ಪೌಡರ್ ಇದ್ದವರ ಮನೆಯಲ್ಲಿ, ಕನ್ನಡಿ ಇದ್ದೇ ಇರುತ್ತದೆ.
 17. ಕಣ್ಣು ಮುಚ್ಚಿದವರೆಲ್ಲ ಮಲಗಿರುವುದಿಲ್ಲ; ಮಲಗಿರುವವರೆಲ್ಲ ಕಣ್ಣು ಮುಚ್ಚಬೇಕೆಂದೆನಿಲ್ಲ.
 18. ಕೆಟ್ಟು ಹೋಗಿರುವ ಕೈಗಡಿಯಾರವನ್ನು ಕಟ್ಟಿಕೊಳ್ಳುವುದು – ಫ್ಯಾಶನ್ನಿಗಾಗಿಯೋ, ಚಟಕ್ಕಾಗಿಯೋ?
 19. ದೇವಸ್ಥಾನದ ಗಂಟೆ ದೇವರನ್ನು ಎಚ್ಚರಿಸಲು ಅಲ್ಲ; ಪೂಜಾರಿಯನ್ನು.
 20. ಆಸೆ ದುಃಖಕ್ಕೆ ಮೂಲವಿರಬಹುದು; ನಿರಾಸೆ ಸುಖಕ್ಕೆ ಮೂಲವಲ್ಲ.
 21. ಬಂಡಲ್ ಜೀವನ; ಬಂಡಲ್ ದುಡ್ಡಿಗಾಗಿ.
 22. ಸನ್ಯಾಸದಲ್ಲಿ ಸುಖವಿಲ್ಲ, ಸಂಸಾರದಲ್ಲಿ ದುಃಖವಿಲ್ಲ; ಎಂದರಿತವನೇ ಜಾಣ.
 23. ಚಸ್ಮಾ ಹಾಕಿಕೊಂಡವರೆಲ್ಲ, ಜಾಸ್ತಿ ಓದಿದವರೇನೂ ಇರಲಿಕ್ಕಿಲ್ಲ.
 24. ದಡ್ಡ ಶ್ರೀಮಂತ, ಜಾಣ ಬಡವನಿಗಿಂತ ಲೇಸು.
 25. ‘ಏನಾಗಿದೆ?’ ಎಂದು ರೋಗಿಯನ್ನೇ ಕೇಳಿ, ಟ್ರೀಟ್ಮೆಂಟ್ ಕೊಡುವ ಡಾಕ್ಟರುಗಳು ‘ಬಿಲ್’ ಕೇಳುವುದೇ ಸೂಕ್ತವೆ?


ನಿತ್ಯ ಸತ್ಯ - ೫