Thursday, December 8, 2016

ನಿತ್ಯ ಸತ್ಯ - ೨


 1. ಸುಳ್ಳಿನ ಸರಮಾಲೆಯನ್ನು ವೈಭವೀಕರಿಸಿ ಹೇಳುವ ಚತುರರನ್ನು ಉತ್ತಮ ವಾಗ್ಮಿಗಳೆಂದು ಕರೆಯುತ್ತದೆ ಈ ಜಗತ್ತು. 
 2. ಈ ಜಗತಿನಲ್ಲಿ ಕಳ್ಳರು ಇರದಿದ್ದರೆ, ಪೋಲೀಸರ ಅವಶ್ಯಕತೆಯೇ ಇರುತ್ತಿರಲಿಲ್ಲ. 
 3. ಸುಳ್ಳನ್ನು ಸತ್ಯವೆಂದು ಸಾಧಿಸಿ, ತನ್ನ ಕಕ್ಷಿದಾರರನ್ನು ಗೆಲ್ಲಿಸಿದ ವಕೀಲರು ಹೆಚ್ಚು ಬೇಗ ಶ್ರೀಮಂತರಾಗುತ್ತಾರೆ. 
 4. ಸತ್ಯವಂತರಿಗಿದು ಕಾಲವಲ್ಲ ಅನ್ನುವುದೆಲ್ಲಾ ಬರೀ ಸುಳ್ಳು; ರಾಜಾ ಹರಿಶ್ಚಂದ್ರನ ಕಾಲದಲ್ಲೂ ಸತ್ಯವಂತರಿಗೆ ಸುಖವಿರಲಿಲ್ಲ. 
 5. ಸೀತೆ, ಲಕ್ಷ್ಮಣರೇಖೆಯನ್ನು ದಾತಿರದಿದ್ದರೆ, ರಾಮಾಯಣದ ಯುಧ್ದ ಸಂಭವಿಸುತ್ತಿರಲಿಲ್ಲ. 
 6. ಅಹಲ್ಯ, ಸೀತಾ, ತಾರ, ದ್ರೌಪದಿ ಮತ್ತು ಮಂಡೋದರಿ – ಇವರುಗಳು ಪಂಚ ಮಹಾ ಪತಿವೃತೆಯರು. ಸೋಜಿಗದ ಸಂಗತಿಯೆಂದರೆ ರಾಮನ ಹೆಂಡತಿ ಸೀತೆಯೂ, ರಾವಣನ ಹೆಂಡತಿ ಮಂಡೋದರಿ ಇಬ್ಬರೂ ಪತಿವೃತೆಯರೇ. ಪತಿ ಒಳ್ಳೆಯವನಿರಲಿ, ಕೆಟ್ಟವನಿರಲಿ, ಸತಿ ತಾನು ಮಾತ್ರ ಪತಿವೃತೆ ಆಗಿರಲು ಸಾಧ್ಯ ಎಂಬುದಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇರೊಂದಿಲ್ಲ. 
 7. ಕಂದಿಲನ್ನು ನೋಡಿ ವಿದ್ಯುತದೀಪ ನಕ್ಕಿತು. ಈಗ ವಿದ್ಯುತದೀಪವನ್ನು ಕಂಡು ಕಂದಿಲ ವಿಷಾದ ವ್ಯಕ್ತಪಡಿಸುತ್ತಿದೆ. 
 8. ದೇವರು ಎಲ್ಲಾ ಕಡೆಗೆ ಇದ್ದಾನೆ ಎಂದು ಆಸ್ತಿಕರು ಹೇಗೆ ನಂಬುತ್ತಾರೋ, ಹಾಗೆಯೇ ದೇವರು ಎಲ್ಲೂ ಇಲ್ಲ ಎಂಬ ನಾಸ್ತಿಕರ ವಾದ ಅಷ್ಟೇ ಸತ್ಯ. 
 9. ಸುಖಿಯಾಗಿರಬೇಕೆಂದರೆ ಹುಚ್ಚನಾಗಬೇಕು, ಇಲ್ಲ ಪೆದ್ದನಾಗಬೇಕು. 
 10. ಕೆಲವು ಶ್ರೀಮಂತರು ಬದವರಾಗಳು ಒಪ್ಪಿದರೆ, ಲಕ್ಷಾಂತರ ಬಡವರು ಶ್ರೀಮಂತರಾಗಬಹುದು. 
 11. ‘ಪ್ರೀತ್ಸೆ’, ‘ಪ್ರೀತ್ಸೋದ್ ತಪ್ಪಾ’, ‘ಪ್ರಿತಿಸ್ಲೇಬೇಕು’, ‘ಪ್ರೀತಿ ಮಾಡು ತಮಾಷೆ ನೋಡು’, ..., ಹೀಗೆಯೇ ಮುಂದುವರೆದರೆ, ‘ಎಲ್ಲರೂ ಮಾಡುವುದೇ ಪ್ರಿತಿಗಾಗಿ’ ಎಂದಾಗಬಹುದು ಮುಂದೊಂದು ದಿನ. 
 12. ಐದೂ ಬೆಳರುಗಳು ಸಮ ಇದ್ದಾರೆ, ಬಲಯುತವಾದ ಮುಷ್ಠಿ ಮಾಡಲು ಸಾಧ್ಯವಿಲ್ಲ. 
 13. ಪರಿಕ್ಷೆ ಪಾಸಾದ ಮಾತ್ರಕ್ಕೆ, ಆ ವಿಷಯ ತಿಳಿದಿದೆ ಎಂಬುದು ಯಾವಾಗಲೂ ಸತ್ಯವಲ್ಲ. 
 14. ಅಂಗೈಯಲ್ಲಿ ಕನ್ನಡಿಯಿದ್ದರೆ, ಎಲ್ಲಿಯ ಹುಣ್ಣನ್ನು ಬೇಕಾದರೂ ನೋಡಿಕೊಳ್ಳಬಹುದು. 
 15. ಹುಣ್ಣಿಮೆ ಕಾಣಿಸುತ್ತದೆ. ಆದರೆ ಅಮಾವಾಸ್ಯೆ ಕಾಣಿಸುವುದಿಲ್ಲ. 
 16. ಗೋಡೆ ಮೇ ಪೋಸ್ಟರ್ ಅಂಟಿಸುವುದು ಕೆಲವರ ಕಾಯಕವಾದರೆ, ಅವುಗಳನ್ನು ಹರಿಯುವುದು ಹಲವರ ಕಾಯಕ. 
 17. ಕಾಮಲೆಯಾದವರು ನೀಲಿ ಗಾಜಿನ ಕನ್ನಡಕ ಧರಿಸಿದರೆ, ಜಗತ್ತೆಲ್ಲ ಹಸಿರು ಹಸಿರು. 
 18. ಮೀಸೆಯಿಲ್ಲದ ಹುಡುಗರನ್ನು, ಹುಡುಗಿಯರು ಅಷ್ಟಾಗಿ ಇಷ್ಟ ಪಡುವುದಿಲ್ಲ. 
 19. ಯಲ್ಲಪ್ಪ – ಸೌದತ್ತಿಯ ರೇಣುಕಾ ಯಲ್ಲಮ್ಮ ದೇವರಿಗೆ ಬೇಡಿಕೊಂಡು ಹಡೆದ ಗಂಡುಮಗು. 
 20. ಮನುಷ್ಯನಿಗೆ ಹೊಟ್ಟೆ ಇರದಿದ್ದರೆ, ದುಡಿಯುವ ಪ್ರಸಂಗವೇ ಬರುತ್ತಿರಲಿಲ್ಲ. 
 21. ಮನುಷ್ಯ ಪ್ರಾಣಿ, ಒಂದನ್ನು ಬಿಟ್ಟು ಮತ್ಯಾವ ಪ್ರಾಣಿಯೂ ದುಡ್ಡಿಗಾಗಿ ದುಡಿಯುವುದಿಲ್ಲ. 
 22. ಲಾಟರಿ ಟಿಕೆಟ್ ಕೊಂದು, ಉದ್ದರವಾದವರು ಬಹಳ ಜನ ಇರದಿದ್ದರೂ, ಹಲವರಾದರೂ ಇದ್ದಾರೆ. 
 23. ಸರಕಾರದ ಕೆಲಸ ದೇವರ ಕೆಲಸ, ಸರಾರಿ ನೌಕರರು ದೇವರ ನೌಕರರು, ಸರಕಾರದ ಹಣ ದೇವರ ಹಣ. ಆದರೆ ಸರಕಾರದ ಇಷ್ಟ ದೇವರ ಇಷ್ಟವಲ್ಲ. 
 24. ಗುಲಾಬಿ ಹೂವಿನೋದಿಗೆ ಮುಳ್ಳು ಇರುವಂತೆ, ಹಣದ ಹೋದತಿಗೆ, ಹೆಂಡತಿ ಗಂಡನಿಗೆ ರಕ್ಷೆಯಾಗಿರಬೆಕು. 
 25. ಕನ್ನಡಿಯ ಮುಂದೆ ಹೆಚ್ಚು ಕಾಲ ಕಳೆಯುವ ಹೆಂಗಲೆಯರೆಲ್ಲಾ, ತಾವು ಹೆಚ್ಚು ಸುಂದರಿಯರಾಗಿ ಕಾಣುತ್ತೆವೆಂದು ತಿಳಿಯುತ್ತಾರೆ.

No comments:

Post a Comment

ನಿತ್ಯ ಸತ್ಯ - ೫